ಮಿಥುನರಾಶಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು ಕಲರ್ಸ್ ಕನ್ನಡದಲ್ಲಿ ೨೯೧೯ ರ ಜನವರಿ ೨೮ ರಿಂದ ೨೦೨೨ ರ ಫೆಬ್ರವರಿ ೨೭ ರವರೆಗೆ ಪ್ರಸಾರವಾಗಿತ್ತು . == ಕಥಾವಸ್ತು == ತನ್ನ ಕುಟುಂಬವನ್ನು ಪೋಷಿಸಲು ಸ್ವಾಭಿಮಾನದ ಹುಡುಗಿಯಾದ ರಾಶಿ ಆಟೋ ರಿಕ್ಷಾವನ್ನು ಓಡಿಸುತ್ತ ಜೀವನ ಸಾಗಿಸುತ್ತ ಇರುತ್ತಾಳೆ. ಆದರೆ, ಆಕೆ ಟ್ಯಾಕ್ಸಿ ಕಂಪನಿಯೊಂದರ ಮಾಲೀಕನಾದ ಮಿಥುನ್‌ನನ್ನು ಆಕಸ್ಮಿಕವಾಗಿ ಇಷ್ಟವಿಲ್ಲದೆ ಮದುವೆಯಾಗುತ್ತಾಳೆ. ಧಾರಾವಾಹಿಯ ಸಂಚಿಕೆಗಳು ಮಿಥುನ್ ಮತ್ತು ರಾಶಿ ಮದುವೆಯ ನಂತರ ಜೀವನದಲ್ಲಿ ಆಗುವ ಬದಲಾವಣೆಯ ಮೇಲೆ ಕೇಂದ್ರಿಕರಿಸಲಾಗಿದೆ. == ಪಾತ್ರವರ್ಗ == ಸ್ವಾಮಿನಾಥನ್ ಅನಂತರಾಮನ್ : ಮಿಥುನನಾಗಿ, ಹಣದ ಮನಸ್ಸಿನ ಸಿಇಒ. ರಾಶಿ ಪತಿ, ಗಿರಿಜಾಳ ಹಿರಿಯ ಮಗ ವೈಷ್ಣವಿ : ರಾಶಿ ಪಾತ್ರದಲ್ಲಿ, ಮಿಥುನ್ ಪತ್ನಿ. ಮಧ್ಯಮ ವರ್ಗದ ಹುಡುಗಿ ಮತ್ತು ಆಟೋ ಚಾಲಕಿ ಯದು ಶ್ರೇಷ್ಠ: ಸಮರ್ಥ್ ಅಲಿಯಾಸ್ ಬಾಬು ಪಾತ್ರದಲ್ಲಿ. ಮಿಥುನ್‌ನ ಕಿರಿಯ ಸಹೋದರ. ಗಿರಿಜಾಳ ಕಿರಿಯ ಮಗ, ಸುರಕ್ಷಳ ಗಂಡ. ಪೂಜಾ ದುರ್ಗಣ್ಣ: ಸುರಕ್ಷಯಾಗಿ, ರಾಶಿಯ ಅಕ್ಕ. ಸಮರ್ಥ್‌ನ ಹೆಂಡತಿ. ರಮ್ಯಾ ಬಾಲಕೃಷ್ಣ: ಕವಿತಾ ಪಾತ್ರದಲ್ಲಿ, ಪ್ರಭಾಕರನ ಎರಡನೇ ಪತ್ನಿ. ಭಾವನಾಳ ಮಲತಾಯಿ. ಹರಿಣಿ: ಗಿರಿಜಾ ಪಾತ್ರದಲ್ಲಿ, ಮಿಥುನ್ ಮತ್ತು ಸಮರ್ಥ್ ತಾಯಿ. ರಾಧಾ ಜಯರಾಮ್: ಅನುರಾಧಯಾಗಿ, ರಾಶಿ ಮತ್ತು ಸುರಕ್ಷಾ ತಾಯಿ. ದೀಪಾ: ಭಾವನಾ ಪಾತ್ರದಲ್ಲಿ, ಮಿಥುನ್ ಮತ್ತು ಸಮರ್ಥ್ ಅವರ ಚಿಕ್ಕಪ್ಪನ ಮಗಳು. ಸೋದರ ಸಂಬಂಧಿ. ಪ್ರಭಾಕರನ ಏಕೈಕ ಮಗಳು , ಕವಿತಾ ಅವರ ಮಲಮಗಳು. ಪ್ರಭಾಕರ, ಮಿಥುನ್ ಮತ್ತು ಸಮರ್ಥ್ ಅವರ ಚಿಕ್ಕಪ್ಪ. ಕವಿತಾ ಅವರ ಪತಿ, ಭಾವನಾ ಅವರ ತಂದೆ. == ರೂಪಾಂತರಗಳು == == ಉಲ್ಲೇಖಗಳು ==